Wednesday 27 March 2024

ಪುಷ್ಪಾಂಡಜ ಮುನಿ ಚರಿತ್ರೆ

ಪುಷ್ಪಾಂಡಜಮುನಿ ಚರಿತ್ರೆ 
[ಭಾಮಿನಿ ಯಲ್ಲಿ]

ಕಿರಣ ಅರ್ಕನೆ ಗೀತೆ ಕೃಷ್ಣನು
ಧರಣಿ ಧೇನಿಗೆ ಬೀಜ ವೃಕ್ಷನು 
ಬೆರಗಿಗಿಟ್ಟದು ಕೋಟಿ ಸಂಕುಲ ಪೊರೆವ ವಿಷ್ಣುವು ತಾ।
ಧರಿಜ ಮನು ವೈವಸ್ವತ ಕುಲಜ
ನರ ಅಭೇದ್ಯದ ಕೋಟೆ ಕಟ್ಟಿಸೆ
ಕರೆದ ಸತ್ಯನಗರಿಯೆನುತೆ ಸತ್ಯಕಾತದಯೊದ್ಯೆ

ಭಾವಾರ್ಥ:
        ಸೂರ್ಯ ದೇವನೆ ಸಮಸ್ತ ಜೀವಕೋಟಿಗೆ ಜೀವವನ್ನು ಕೊಟ್ಟ ಗೀತೆಯ ಕೃಷ್ಣನು,ಅಣುಅಣುವಾಗಿ ಒಳಗೆ ನಿಂತು.ಪ್ರಾಣಿ , ಪಕ್ಷಿ ,ಹಸಿರು,ವನಗಳಿಗೆಲ್ಲ ಸೊಗಸ್ಸನ್ನ ಕೊಟ್ಟಿರುವ , ಸಾಕ್ಷಾತ್ ವಿಷ್ಣು ರೂಪವು ಆಗಿರುವನು.

       ಈ ಭೂಮಿಯಲ್ಲಿ ಹುಟ್ಟಿದ ಪ್ರಪುರುಷ ಮನು. ಈತನೆ ಸೂರ್ಯನ ಪುತ್ರ,ಪ್ರಕೃತಿ ಪುರುಷನು.ಈ ತನು ಮನುಷ್ಯರಿಂದ ಭೇದಿಸಲು ಸಾಧ್ಯವಿಲ್ಲ ದ ಕೋಟೆ ಯೊಂದನ್ನು ಕಟ್ಟಿಸಿದನು.ಅದಕ್ಕೆ ಸತ್ಯ ನಗರಿ ಎಂದು ಕರೆದ. ಸತ್ಯಕ್ಕೆ,ನ್ಯಾಯಕ್ಕೆ, ನೀತಿಗೆ, ರಾಮತೆಗೆ,ಸಂಸ್ಕಾರಕ್ಕೆ ಹೆಸರಾಗಿ  ಅಯೋಧ್ಯೆ ಎಂದು ಈ ಭೂಮಿಗೆ ಹೆಸರಾಯಿತು....

ಕಾಶಿ ಉಜ್ಜಯಿನಿ ಅಯೋಧ್ಯನಗರಿ
ಮಥುರ ಕಂಚಿ ಹರಿಧ್ವಾರ ಪುರವು
ಕೃಷ್ಣನ ಧ್ವಾರಕೆಯು ಏಳು ಐತಿಕ ತೀರ್ಥ ಕ್ಷೇತ್ರವೂ/
ಜೈನ ಸಾಕೇತನಗರವಿದುವು
ವಿಷ್ಣ ಚಕ್ರದಿ ನಿಂತ ಇನಧರೆ
ದೇವರೆ ಜನುಮವೆತ್ತ ಮೃತ್ತಿಕೆ ಸನಾತನಕಿದೊ#

ಭಾವಾರ್ಥ:

           ಭರತ ಖಂಡದ ಏಳು ಅತಿ ಪ್ರಾಚೀನ ಪುರಾಣ ಪುಣ್ಯ ಕ್ಷೇತ್ರಗಳಾದ ಕಾಶಿ - ವಿಶಾಲಾಕ್ಷಿ ವಿಶ್ವನಾಥರ ಧರ್ಮ ಕ್ಷೇತ್ರ. ಉಜ್ಜಯಿನಿ-ಶಿವ ಪಾರ್ವತಿಯರ ಕ್ಷೇತ್ರ. ಅಯೋಧ್ಯೆ -ಸೀತಾರಾಮರ ಧರೆ. ಮಥುರ- ಶ್ರೀ ಕೃಷ್ಣನ ಪುಣ್ಯ ನೆಲ. ಕಂಚಿ- ಕಾಮಾಕ್ಷಿ ದೇವಿಯ ಕ್ಷೇತ್ರ.ದ್ವಾರಕಾ- ಕೃಷ್ಣನ ಕನಸಿನ ನಗರಿ. ಈ ಹಳೆಯ ಕ್ಷೇತ್ರಗಳ ಸಾಲಿಗೆ ಸೇರಿ ಕಂಗೊಳಿಸುತ್ತಿರುವ ನಗರದಲ್ಲಿ ಅಯೋಧ್ಯೆಯು ಒಂದು.

          ಜೈನರ ಮೂರು ತೀರ್ಥಂಕರ ಹುಟ್ಟಿಗೆ ಕಾರಣವಾದ ಈ ನಗರ ಸಾಕೇತನಗರಿ ಎಂದು ಹೆಸರಾಗಿದ್ದು ಇದೆ. ಅಯೋಧ್ಯ ನಗರಿ ವಿಷ್ಣು ಚಕ್ರದ ಮೇಲೆ ನಿಂತಂತಿದೆ. ಸನಾಥನ ಧರ್ಮಕ್ಕೆ ದೇವರುಗಳು ಕೊಟ್ಟ ಪುಣ್ಯಭೂಮಿಯಾಗಿ ಅಯೋಧ್ಯೆ ಕಮಲ ಕೇಸರವಾಗಿ ಮೆರೆಯುತಿದೆ...

      ✍️ ಸಂತೋಷ್ ನಾರತ್ನಮ್ಮಾರ

Monday 18 March 2024

జ్యోతుల మంద

జ్యోతుల మంద (పాట)

వెలిగించిన జ్యోతుల
మిణుగురు గీతల రెక్కలలొ
కళకళలాడే చౌడేశ్వరి
మూర్తిని కనుక్కొని వెళ్ళుతున్నవి  చూడు జ్యోతుల మంద//

ఎరుపు ముడిపంచ
జనివార దారం కట్టుకుని
దైర్యం నిండిన ఛాతీలొ
సచ్చిదానందే రూపము చూసి వెళ్ళుతున్నవి చూడు కృతజ్ఞతలతో//.....

వీరతోగజ రసం కార్చి
వ్యాపించిన ఈ ఖడ్గపద్యములొ
అక్షరాలుగ కూర్చుని
కాశి విశాలాక్షి తను పుట్టిన రాగానికి కరుణించింది సాగరం గా//......

పట్టుచీరల వస్త్రము
మగ్గము నేయించి తెచ్చి
పుట్టింటి భాగ్యంగా
పెట్టిన అగ్గికుండ హోమము నామది
మొక్కుతు పోతున్నాయి జ్యోతిభజన నిండీ//.....

✍ సంతోష్ నాగరత్నమ్మర


Sunday 17 March 2024

పుష్పాండజముని

#పుష్పాండజముని 


ధ్యానం గుట్టే
లోపల కూర్చోని
చీకటికి అంజిన బాలుడు తల్లిని పిలివినట్టు
ధ్యానం చేశాడు
ఓంకారం నిండి
మనస్సు లోపలలో
చూడిక్కడ.,.....

గోధుమ పిండిలో
చేసిన జ్యోతిని
నెత్తిమీద మొసి
ఖడ్గం పద్యానికి
అడుగుజాడలు వేసుతు
నృత్యం చేసి
భక్తి భావంతో
మొక్కి నిలిచి ఉన్నాడు
చూడిక్కడ.,......

చేతుల కత్తి
నృత్యమ్ చేస్తూ ఉండగా మెరుపుల
వీర రసమ్
లావం ల బయట వచ్చి
మాట అగ్గి
అల్లరి చేసి
చౌడమ్మని పొగడుతు ఉన్నాడు
నువ్వు చూడు.....

గుడి గోపురంలో
కూర్చున్న
ఉత్సవ మూర్తిని
పల్లకిలో
భుజం పై మోసి
ఒళ్ళికి కాషాయ
అగ్గియం
గట్టిగా ధరించి
నడిచాడు
వెలుగులో
చూడు ఇక్కడ......

✍️ సంతోష్ నాగరత్నమ్మర


ಮೌನ ಸಂಪಿಗೆ

ದುರ್ಗದ ಕಲ್ಲಿನಕೋಟೆಯ🪨 ಆಳೆತ್ತರಕೆ ಹೆಡೆ ಚಾಚಿ ನಿಂತ ನಾಗರಹಾವಂತ ನೆರಳಲ್ಲಿ..... ವಿಷ್ಣುವರ್ಧನನ ಕುಡಿಮೀಸೆ ಕುವರ ಸಿದ್ದೇಶಿ ಸುಮ್ಮನೆ ನಿಂತಿದ್ದ...

ಅಲ್ಲಿಯೆ ಗಿಡದಲ್ಲಿ ಅರಳಿ ನಗುತಿದ್ದ ನಸುಗೆಂಪು ಸಂಪಿಗೆ ಹೂವ್ವೊಂದ ಕೈಲಿಡಿದು ಕೋಟೆ ಬಾಗಿಲಿಗೆ ಭುಜವೊರಗಿ....

ಕೋಟೆಯೆದುರು ಮದಕರಿಯ ಶೌರ್ಯ,ಓಬವ್ವನ ಗತವೆಲ್ಲ ಓದಲೆಂಬಂತೆ ನಿಂತಿರುವ ಮಹಾರಾಜ ಕಾಲೇಜು ಇವನನ್ನೆ ದಿಟ್ಟಿಸುತಿತ್ತು ಮೌನದಿ...

ಈ ದಿನ ಏಕೊ ಸಿದ್ದುಗೆ ಹೊಸತೆನಿಸಿತು ಅವನಿಗೆ ಪ್ರವೇಶ ದ್ವಾರ.....ಯಾರದೊ ಆಗಮನಕೆ ಕುಂಡದ ಹೂವಿಡು ನಿಂತಂತೆ.....

ಸಂಪಿಗೆಯ ವೃಕ್ಷದ ನೆರಳು ತಾನಿಂತ ನೆರಳಿಗೆ ಹೊತ್ತೇರಿದಂತೆ ಮೆಲ್ಲ ಮೆಲ್ಲನೆ ಬಂದು ಆವರಿಸುತಿತ್ತು ಅವನು ನಿಂತ ನೆಲದೆಡೆಗೆ.....

ಬೆರಗು ಗಣ್ಣಿನಲೆ ದಿಟ್ಟಿಸುತ ನಿಂತವಗೆ ಕೋಟೆ ಗೋಡೆ ಇದ್ದಕ್ಕಿದ್ದಂತೆ ಭುಜಬಿಡಿಸಿ ನೋಡಲ್ಲಿ ಎಂದಂತಾಗಿ .....ನೋಡಿದ ಎದುರಿಗೆಯೆ ಇದ್ದ ಕಾಲೇಜಿನ ಕಡೆಗೆ ತನ್ನ ಬೆರಗು ದಿಟ್ಟಿಯ ಕಿರಣವನು ಹಾಯಿಸತ....

ಮೌನ ಮಾತಿನಲೆ ನಗೆಮೌನದ ಚೆಲುವೆ ಯೊಬ್ಬಳ ಸ್ವಾಗತಿಸಿಕೊಂಡಿತು ಕಾಲೇಜು ದ್ವಾರ.....ಅಲ್ಲಿದೆ ನೋಡು ಹೊಸ ಪ್ರವೇಶ ಕಚೇರಿ ಹೋಗಿ ಬೇಗ ನನ್ನೊಳಗೆ ಕಲಿಕೆಗೆ ಸೇರಿ ರೆಕ್ಕೆಬಿಚ್ಚೆಂದು ಗುಬ್ಬಿಯ ಗೂಡಂತೆ ನಿಂತಿತ್ತು ಮೌನದೆ....

ಸಿದ್ದೇಶಿಗೆ ಎದೆಲೆಲ್ಲೊ ಪುಳಕ ಇದುವರೆಗೂ ನಾ ಕಂಡಿರದ ಸೊಬಗೊಂದು ಸುಳಿದಿರುವ ಖಾತರಿಯೆನಿಸಿ...ಅವಳು ಸಾಗಿ ಹೋದ ಹೆಜ್ಜೆಗಳ ಬಿಸಿ ಆರಗೊಡದೆ ಹಿಂದೆಯೆ ನೆಡದ ಆ ಹೢಜ್ಜೆಗಳ ನನ್ನ ವಿನಹ ಮತ್ತಾರು ತುಳಿಯ ಬಾರದೆಂದು....

ಇದ್ದಕ್ಕಿದ್ದಂತೆ ಎದೆ ಬಡಿತದ ಎದೆಗೆ ಮಂತ್ರವೊಂದು ಬಿದ್ದಂತಾಗಿ....ಒಳ ಪ್ರವೇಶಿಸಿದ ಗೆಳೆಯ ಸ್ವಾಮಿಯ ಜೊತೆಗೂಡಿ....ಪ್ರವೇಷ ರೂಂ ಬಾಗಿಲ ಮುಚ್ಚಿ ಕುಂತಿತ್ತು ಇರು ಇನ್ನೇನು ಬರುವ ಹೊತ್ತು ಎಂದು ಮೌನದಿ ಹೇಳುತ.....

ಪ್ರವೇಶ ದ್ವಾರ ಪಕ್ಕಕೆ ಬರುತಿರಲು ತಿರುವಿಗೆ ದುತ್ತನೆ ಎದುರಾದಳು ಪೋರಿ...ಬಸ್ಸಿಳಿದು ತರಾತುರಿಯಲ್ಲೆ ಹೊಸ ನೆಲ ಹೊಸ ಕಾಲೆಜೆಂಬ ದಿಗಿಲಿನಲ್ಲಿ ಬಂದ ಅವಳ ಉಸಿರಲ್ಲಿ ಏರಿಳಿತವಿತ್ತು.....ಇನ್ನೇನು ಬರುವ ಹೊತ್ತು ಫಣಿಮಾಮ್ ಅಡ್ಮಿಷನ್ ಕೊಡುತ್ತಾರೆಂದು ಒಂದಿಷ್ಟು ಕಾಳಜಿಯ ತೋರಿ ತಾಯೊಟ್ಟಿಗೆ ಬಂದಿದ್ದ ಆಕೆಗೆ .......

ಕಚೇರಿ ಎದುರಿದ್ದ ಬೆಂಚಿನ ಹಾಸ ತೋರಿ.....ತಾನು ಅಲ್ಲೆ ಇದ್ದ ಗೋಡೆಗಾಂತು ಮರೆಮಾಚಿ ಅವಳ ಅಂದಕೆ ಮಾರುಹೋಗಿ ನಿಂತು ಬಿಟ್ಟ...

ಬಚ್ಚಿಟ್ಟ ಕಾದು ಕುಳಿತ ಹರೆಯವೊಂದು ಮದಕರಿ ಕೋಟೆಯ ನೆತ್ತಿಗೆ ಏರಿ ಗರಿ ಬಿಚ್ಚಿ ಕೂಗಿ ನಿಂತಂತೆ... ಮುಂಜಾನೆಯ ಸಂಪಿಗೆಯೆ ಹೂವ್ವೆ ನನ್ನ ಸೇರಿದ್ದು ಇದಕೆಂಬಂತೆ...

ಈಗ ಅವನ ಕಣ್ಣಿನಲ್ಲಿ ಅವಳದೆ ರೂಪು ವನಪು ವಯ್ಯಾರ ಮನದ ಹಾಳೆಗೆ ಬರೆದು ಕೊಳ್ಳ ತೊಡಗಿತು.....

ನಿನ್ನ ಕರ್ಣಕುಂಡಲ
ನನ್ನ ಕರೆತಿದೆ ಪಿಸುಮಾತಿನಲಿ ತೂಗಿ
ನನ್ನುಸಿರ ಬಿಸಿಯಪ್ಪಿಗೆಗೆ
ಸಾಕ್ಷಿಗೆಂಬಂತೆ

ಸೆಳೆತಿವೆ ಕಣ್ಣುಗಳು
ನಗೆಯ ಬಾನಿಗೆ ಚಿಕ್ಕಿಗಳನೆ ಬಿರಿದಿಕ್ಕಿ
ನನ್ನ ಕರಿಕಪ್ಪ ಕತ್ತಲಿಗೆ
ಬೆಳಕ ದೀಪಗಳೆರಡ ಯಾರೊ ಹಚ್ಚಿಟ್ಟಂತೆ

ಕದಪ ಮೌನವು
ಮಾತಿನ ಮುತ್ತಿನ ಕಾಳ ಕುಟುಕಿಗೆಂದು
ಬಾಯಾರಿ ಬಂದು
ಕೂತಂತಿದೆ ಹಕ್ಕಿಯೊಂದು...
ಗುಲಾಬಿ ಗಿಡದಲ್ಲಿ

ನೀಳ ನಾಸಿಕದ ಹೊಳೆವ ನತ್ತು
ತುದಿಕೋಪದ ಹನಿಗಳನೆಲ್ಲ
ಹೆಕ್ಕಿ ಕುಡಿಯಲೆಂದು.....ಕಾಡು ಬಿಟ್ಟು ಧಣಿದು ಬಂದ
ಪುಟ್ಟ ರೆಕ್ಕೆ ಬಿಚ್ಚಿದ.....
ಗುಬ್ಬಿಯಂತೆ ಕುಳಿತಿದೆ

ಅಷ್ಟರಲ್ಲೆ ಭುಜಕ್ಕೆ ಕೈ ಹಾಕಿ ಯಾರೊ "ಏಯ್ ಸಿದ್ದು ಏನ್ ನೋಡುತ ನಿಂತಿ ಇಲ್ಲಿ ಅಷ್ಟೊಂತಿಂದ ಬಾ ಅಲ್ಲಿ ಲೈಬ್ರರಿ ರೂಂ ಹತ್ರ ಬಸಪ್ಪ ಪ್ರಿನ್ಸಪಾಲ್ ತಮ್ಮ ಅಕೌಂಟನ್ಯಾಗ ಬುಕ್ ತೆಗಿಸಿಟ್ಟು ಕರಿಯಾಕ ಹತ್ಯಾರ "
ಸ್ವಾಮಿಯ ಧ್ವನಿ ಬಿದ್ದದ್ದೆ ತಡ....

ಅಂದದ ರಾಶಿಯನ್ನೆಲ್ಲ ಅಲ್ಲೆ ಬಿಟ್ಟು ಓಡಿದ.ಆವಯ್ಯನ ಗದರಿಗೆ ಹೆದರಿ ಇಲಿ ಯಂತಾಗುವ ಅವನ ಕೆಚ್ಚನು ನೆನೆದು....

"ಭುಜಕ್ಕೆ ಕೈ ಹಾಕಿ.... ಎಷ್ಟೊತ್ತು ಬರಾಕ ತಗ ಸಹಿ ಮಾಡು ಈ ಬುಕ್ಕೆಲ್ಲ ಓದಿ ಬೇಗ ಮುಗಿಸಿ ನೋಟ್ಸ ಮಾಡ್ಕೊ " ಅಂದವರೆ ಅಡ್ಮೀಷನ್ಸ ಇದಾವೆ ಅನ್ನುತ ಫಣಿ ಬಂದ್ರ ಅನ್ನುತ್ತ.....ನೆಡೆದರು.

ಸಿದ್ದು ಮನದಲ್ಲೆ ಅಂದು ಕೊಂಡ ತಾಯಂತ ಲೆಕ್ಚರ್ ಸಿಕ್ಕಿದ್ದು ಪುಣ್ಯವೆಂದು ಮನದಲ್ಲೆ ಬಗೆದು ....

ಗಿರಿ ತಿಪ್ಪ ತನ್ನೆಲ್ಲ ಗೆಳೆಯರು ಲೈಬ್ರರಿಯಲ್ರಿ ಮಾತಾಡಿಸಿದರು ಮಾತಾಡದಂತೆ ಯಾವುದೊ ಗುಂಗಿಗೆ ಸಿದ್ದ ಕಳೆದು ಕೊಂಡಿದ್ದ.....

ಯಾಕೊ ಪ್ರಿನ್ಸಿಯ ಪ್ರಿನ್ಸ್ ಗೆ ಇವತ್ತು ಏನೊ ಆಗಿದೆ ಅನ್ನುತ್ತ ಅಲ್ಲಿಂದವನ ಗೆಳೆಯರೆಲ್ಲ ಎದ್ದು ರಾಜಶೇಖರ ಸರ್ ಕ್ಲಾಸ್ ತಗೊತಾರೆ ನಡಿರೆಂದು ಹೊರಟರು...."ಬಂದೆ ತಡಿರೊ" ಅನ್ನುತಿದ್ದ ಸಿದ್ದು ಇವತ್ತು ತನ್ನ ಮನದಲ್ಲಿ ಅಂದು ಕೊಂಡನೇನೊ ಅವರಿಗೆ ಕೇಳಿಸದಾಗಿ ಹೋದರು....

ಈಗ ಒಬ್ಬನೆ ಮೌನ ಮಡುಗಟ್ಟಿದ ಲೈಬ್ರಲಿ ಕುಳಿತಿದ್ದಾನೆ.ಬಗಲಲ್ಲಿ ಬುಕ್ಕ ಜೋಡಿಸಿ ಹಿಡಿದುಕೊಳ್ಳುವುದನ್ನು ಬಿಟ್ಟು...ಮಾಯ ಶಾರದೆಗೆ ಮನ ಸೋತಿದ್ದಾನೆ ಅವಳಂದದ ಬುಕ್ಕಿನಲ್ಲಿ ತಾನು ಅಕ್ಷರವಾಗಿ ನಿಲ್ಲ ಹೊಂಟು ಭಾವಲೇಖನಿ ತೆಗೆದು ಮನದಲ್ಲೇನೊ ಗೀಚುತಿದ್ದಾನೆ...

ಗಲ್ಲದ್ರಿ ಕಣಿವೆನಿಂತು
ಮೆಲ್ಲಮೆಲ್ಲಗೆ ಮುಳುಗುತ್ತಿರುವಂತಿದೆ
ಬಯಕೆಗಡಲು ಅಲೆಅಲೆಗಳ
ಮೊರೆತವಿಕ್ಕಿ ಒಳಗೊಳಗೆ ತೂಗುತಿರಲು

ಮೆಲ್ಲನೆ ಲೈಬ್ರರೀ ಹೊರಬಿದ್ದು ಆಫೀಸ್ ರೂಂ ಕಡೆಗೆ ಹೊಂಟ.ಸೂರ್ಯನೆರಚಿದ ಬಿಸಿಲಿಗೆ
ನೆರಳ ಹದ್ದೊಂದೂ ಬೇಟೆ ಹುಡುಕಿ ಸಾಗುವಂತೆ ಸಾಗುತಿತ್ತು.....

ಇನ್ನಾದರೂ ಪ್ರವೇಶ ಪಡೆಯದೆ ಅಲ್ಲೆಬೆಂಚಲ್ಲಿ  ಕೂತಿದ್ದರು ತಾಯಿ ಮಗಳು.ಅಡ್ಮೀಷನ್ ಮಾಡಿ ಪೀಜು ಕಟ್ಟಿದ ರಿಷಿಪ್ಟ ಪ್ರಿನ್ಸಿಯ ಸಹಿಗಿದ್ದದ್ದ ಕಾದು....ಸಿದ್ದು ತನು ತರಂಗಗಳು ಅವರಿದ್ದ ವ್ಯಾಪ್ತಿಗೆ ಹೋಗಲು ತಾಯಿ ಜೊತೆ ಕೂತಿದ್ದ ಆ ಹುಡುಗಿ ಇವನ ನೋಡುತಲೆ ಎದ್ದು ನಿಂತಳು....
ಪೀವೊನ್ ಕೊಟ್ಟ ರಿಷಿಪ್ಟು ಕೈ ಸೇರಿತಾಗ ಅದನ್ನ ತೋರಿ

"ರೀ...ರೀ...ರೀ....ಕ್ಲಾಸ್ ಯಾವ್ ರೂಂ ಯಾವ್ ಕಡೆ ಬರುತ್ತೆ ಇಂಗ್ಲಿಷ್ ಮೇಜರ್ ಅನ್ನುವ ಧ್ವನಿಗೆ ಕೋಟೆ ಕಲ್ಲಂತಿದ್ದವ ಕರಗಿ ನೀರಾಗಿ ,ನೀರ ವೇದವತಿ ನದಿಯಂತಾಗಿ ಸರಸರನೆ ಬನ್ನಿ ತೋರಿಸುತ್ತೆನೆ ಎಂದು "ತನ್ನ ಮೇಲೆ ಹರಿದಾಡಿ ಬರುವ ತೆಪ್ಪದಂತೆ ತಾನು ಸಹ ಅದೆ ಕ್ಸಾಸ್ ಗೆ ಹಾಜರಾದ ಹಸರು ತಿಳಿದಿರದ ಅವಳೊಟ್ಟಿಗೆ......

ಆಕೆ ತನ್ನ ತಾಯಿಗೆ ನೀ ಹೋಗೆಂದು ನಗೆಯಿಕ್ಕಿ ಸ್ಥೈರ್ಯದ ಹೋಗೆಂದು ನಿಂತು ಬಾಗಿಲಲ್ಲಿ ಒಬ್ಬರೊಬ್ಬರು ಅರಿಯದೆ ಆತ್ಮದ ಕೂಗೆಂಬಂತೆ ಒಟ್ಟು ಧ್ವನಿಲೆ "ಮೇ ಐ ಕಮಿನ್ ಸರ್  " ಅನ್ನಲು ರಾಜಶೇಖರ್ ಸರ್ ಎಸ್ ಅನ್ನಲು ಬಂದವರನ್ನೆ ದಿಟ್ಟಿಸಿ ನೋಡುತಿತ್ತು.....

ಇಡೀ ತರಗತಿಯೆ ಕಣ್ಣಲ್ಲೆ ಭಾಷ್ಯವನ್ನ ಮನದಲ್ಲೢ ಬರೢತಿತ್ತು ಮೆಲ್ಲಬರುವ ಅವರಿಬ್ಬರ ನಡಿಗೆಯ ಹೆಜ್ಜೆಗಳಿಗೆ .......

ಬಂದವನಿಗೆ ಸ್ವಾಮಿ "ಇಲ್ಲಿ ಬಾ ಎಂದು" ಪಕ್ಕ ಸಿದ್ದುನ ಕೂಡಿಸಿ ಕೊಂಡ.ಇದೇ ನೇರದಲ್ಲಿ ಅರುಣ ಒತ್ತಿ ಸರಿದು ಕೂರಿಸಿಕೊಂಡಳು ಜೊತೆಗೆ ಕ್ಸಾಸ್ ಒಳಗೆ ಬಂದ ಆಕೆಗೆ......

ಹಾಜರಿ ತಗೊಂಡಾಗಿದ್ದರೂ ಸಹ ಸಿದ್ದನ ಹಾಜರಿ ಹಾಕಿಕೊಂಡು ಅವಳತ್ತ ನೋಡಿ " ನ್ಯೂ ಅಡ್ಮಿಷನ್ನ ಏನಮ್ಮ ?ಹೆಸರೇನು ಅನ್ನಲು?" ತಕ್ಷಣವೆ ಸಿದ್ದುನ ಎದೆ ಕಿವಿನಿಮಿರಿ ದಂತಾಗಿ ಕಿವಿಗೆ ಬಿತ್ತು ಕೋಗಿಲೆಯಂತಹ ಮಧುರ ಧ್ವನಿಯಲಿ "ಹೆಸರು ಸಂಪಿಗೆ ಸರ್ "ಎಂದು ಕೂತು ನೋಟ್ಸ ತೆರೆದು ಪೆನ್ನಿಡುತ......[ಈ ಕಥೆಯ ನಾಯಕಿ].....

ಸಂಪಿಗೆಯ ಕಂಪಿನಲ್ಲೀಗಲೆ ಕರಗಿ ನದಿಯಾಗಿ ಹೊಳ ಹರಿದಿದ್ದ ಸಿದ್ದು ತಾನು ಮಾತ್ರ ಬರೆದು ಕೊಳ್ಳದೆ ಹೀಗೆ ಕ್ಲಾಸ್ ಕೇಳಿಸಿಕೊಳ್ಳುತ್ತೇನೆ ಎಂಬಂತೆ ಸರ್ ಕಣ್ಣತಪ್ಪಿಸಿ ತನ್ನನ್ನ ಆ ಕಡೆ ಸಾಲಿಗೆ ಕೂತ ಸಂಪಿಗೆಯನ್ನೆ ನೋಡುತ್ತ ಬರೆಯತೊಡಗಿದ ತನ್ನ ಮನದ ನೋಟ್ಸಿನ ಹಾಳೆಗಳಲ್ಲಿ.......

ನಿನ್ನ ತುಟಿ ದೋಣಿಯು
ಬರುವುದನೆ ಕಾದು ನಿಂತಿವೆ.......
ಮುಗುಚಿಕೊಳ್ಳಲು....ಬಿಳಿಚಿಕೊಳ್ಳಲು....
ಕುಳಿಗಲ್ಲದ ಕೊಳ್ಳದಲ್ಲಿ
ಮೆಲ್ಲಮೆಲ್ಲನೆ ದಾರಿಬಿಟ್ಟು ದೋಣಿ ಸಾಗಿಗೆಂಬಂತೆ....
ಲಂಗರೆಳೆಯುತಿದೆ....

ಕಪ್ಪು ಕುರುಳೆಲ್ಲ ಒಟ್ಟೢದ್ದು
ಹೆಪ್ಪುಗಟ್ಟಿನಿಂತಿರುವ ಹೆಡೆಯಂತೆ
ಮೊಗದಂದ ಚೆಂದನೆಲ್ಲ ಬಚ್ಚಿಟ್ಟುಕೊಳ್ಳುವ ಗುಹೆಯಂತೆ ಚಾಚಿ...
ನಿಂತಿದೆ ನಾಗಜಡೆಯು....

ಉಟ್ಟ ಸೀರಿಗೆ ಸೊಕ್ಕು ತುಂಬಿದೆ
ತಂಗಾಳಿಗಿಕ್ಕಿ ಮಾತಿಗಿಳಿದು
ಅಂದಕೆ ಕಾರಣ ನಾನೆಂದು ಸುಳ್ಳೢ ಬೀಗಿದೆ
ಕುಬುಸ ಬಿಲ್ಲಿಗೆ ಬಿಗಿದು ಗಾಳಿಯ ಬಾಣ
ಕೆಣಕಿದೆ ಚೆಲುವೆರಚಿ........

ಕುತ್ತಿಗೆಯ ಹೊತ್ತದ ಕಂಠಹಾರ
ನನ್ನ ತೋಳಾಗ ಬಾರದೆ
ಬಿಗಿದಪ್ಪುವ ಒಡವೆ ಗೊಡವೆಗಿಳಿತಿದೆ ಮನ
ಇಷ್ಟದಿನ ಎಲ್ಲಿತ್ತು ಈ ಮೌನ?
ಇಂದೇಕೆ ಸೆಳೆತಿದೆ ನನ್ನ........

ಕ್ಸಾಸ್ ಮುಗಿಸಿ ರಾಜಶೇಖರ್ ಸರ್ ಮಳೆ ನಿಂತ ಧರೆಮಾಡಿ ಕ್ಸಾಸ್ ರೂಂ ಹೋಗಿರಲು....ಚಟ್ಟನೆ ತಲೆಗೆ ಮೊಟುಕುತ ಸ್ವಾಮಿ ,......."ಏಯ್ ನಾನು ನೋಡುತ ಇದೀನಿ ಏನ್ ಒಂದೇ ಸಮನೆ‌ ಆ ಹುಡಿಗಿನ ನೋಡುತ ಇದೀಯ ? ",ಅನ್ನಲು ಇಲ್ಲೆಂಬಂತೆ ತಲೆಯಾಡಿಸತ ವಾಸ್ತವಕೆ ಬಂದನು.

"ನಡಿರೆಲ್ಲ ಕ್ಯಾಂಟೀನ ಟೀಗೆಂದು ಎಲ್ರರು ಎದ್ದರು ,ಸಿದ್ದು ಮಾತ್ರ ಎದ್ದೇಳದ ಬೇಡ ಅನ್ನುತ್ತಿದ್ದವನನ್ನು ಸ್ವಾಮಿ ಬಿಡದೆ ಜೊತೆಗೊಯ್ದ. ಗೆಳೆಯರೊಟ್ಟಿಗೆ ಟೀ ಕುಡಿತಿರಲು 

"ಕುಡಿಯೆಲೆಂದಿ ಹಿಡಿದ ಕಪ್ಪನ್ನೆ ಅವಳ ತುಟಿಯೆಂದು ಭ್ರಮಿಸಿ ನಾಲಗೆ ಸುಟ್ಟು ಕೊಂಡಿದ್ದು" ಮಾತ್ರ ಗೊತ್ತಾಗದೆ ಹರಟೆ ನಿಂತ.....ಮನಸ್ಸ ಹಕ್ಕಿ ಮಾತ್ರ ತರಗತಿಯ ಬೆಂಚಮೇಲೆ ಕುಳಿತು ಅವಳೊಂದಿಗೆ ಕಣ್ ಕಣ್ ಸಲಿಗೆಗೆ ಕಾಳ ಎದೆಗೆ ಹೆಕ್ಕಿಕೊಳ್ಳುತಿತ್ತು............

,*****""**🙏🙏🙏🙏🙏****""""
[ಪ್ರಪ್ರಥಮ ಯತ್ನ ,ನಾನೆಂದೂ ಇಂತಹ ಬರವಣಿಗೆಗೆ ಕೈ ಹಾಕಿದ್ದಿಲ್ಲ ಇಂದೇಕೊ ಬರೆಯ ಬೇಕೆನಿಸಿ ಬರೆಯುತಿದ್ದೇನೆ ತಪ್ಪೊ ಒಪ್ಪೊ ತಿಳಿಯದಾಗಿದೆ......ತಪ್ಪಿದಲ್ಲಿ ಸಿದ್ದನ ಗೆಳೆಯ (ತಿಪ್ಪೆ)ಸ್ವಾಮಿಯಂತೆ ಮೊಟಕದೆ ತಿಳಿಸಿ ಹೇಳಿ ದಯವಿಟ್ಟು ಸರಿ ಮಾಡಿ ಕೊಳ್ಳುತ್ತೆನೆ ....ಇಲ್ಲಿ ಅನನುಭವಿಯು ನಾನು ತಿಳಿದವರು,ಬೆಳೆದವರು,ಎದೆಗೆ ಉಳಿದವರು,ಮನವ ಮೆರೆವವರು ನೀವು ,,,,,ಈ ಪೀಲ್ಡಲ್ಲಿ ನಾನೊಂದು ತೃಣ ಮಾತ್ರ,,,,,,,,🙏🙏🙏🙏🙏🙏🙏✍️✍️

ಮುಂದುವರಿಸುತ್ತೇನೆ ನಿಮ್ಮ ಚಿಕ್ಕದೊಂದು ಸಹಕಾರದದೀಪ ಬೆಳಗು ಸಿಕ್ಕರೆ........

✍️ಸಂತೋಷ್ ನಾಗರತ್ನಮ್ಮಾರ

ದನಗಾಹಿ


ದನಗಾಹಿ

ಜಿಡ್ಡುಗಟ್ಟಿದ ಅಂಗಿ
ಬೆವರು ಮೈಯ್ಯ ಕಮಟು
ತಲೆತುಂಬ ಸುತ್ತಿದ
ರಕ್ಷಣೆಗೆಂದೆ ಮುಂಡಾಸು
ಹರಿದದ್ದ ಮರೆಮಾಚಿ
ಗಂಟಿಕ್ಕಿ ಉಟ್ಟ ಬಿಳಿಕಚ್ಚೆ
ಹಿಮ್ಮಡ ಸವೆದ ಕಿತ್ತ ಉಂಗುಷ್ಠದ ಚಪ್ಪಲಿ
ಕೈಯಲ್ಲಿ ಹಿಡಿದೊಂದು
ಡೊಂಕು ಧನಕೋಲು
      ನಿತ್ಯದಿವು ರೂಪರೇಖು ಜೊತೆಗೆ ತನ್ನ ಕರಿನೆರಳು

ಸರಗುಣಿಕೆ ಬಿಚ್ಚಿ ಬಿಟ್ಟು ಅಟ್ಟಿದ
ಹಸುವಿನ ಕೊರಳ ಅಗ್ಗ
ದನಪಾಲನೆಂಬುದಕೆ ಸಾಕ್ಷಿಗೆ
ಹಿಂಡ ಮೇಯಿಸಲು
ಅಡದಿ ಹೊಲದ ಮೇವಿನ ಲೆಕ್ಕ ಕೇಳತ
ಕರೆಕಲ್ಲ ತನಕ  ಬಿದ್ದ ಸಗಣಿಯ
ಎತ್ತಿ ತಂದು ಹಿತ್ತಲಲ್ಲಿ
ಕೋಳಿ ಕೆದರುತ್ತಿದ್ದ ತಿಪ್ಪಗಾಕಿ
ಮತ್ತೊಮ್ಮೆ  ಅಡಿಕೆ ಎಲೆ ಹೊಗೆ ಸೊಪ್ಪ
ಅಜ್ಜಿಗಂಟಲಿ ಮೆದ್ದು
ಹಾಲ ಕರುಗೆ ಹುಲ್ಲಿಡೆಂದು ಹೇಳಿ
            ಹೊಂಟ ಪರಿಯಲಿತ್ತು ಕಾಳಜಿ
ಮಮತೆ,ರಕ್ಷಣೆ,ಜ್ವಾಪಾನ

ಐನೋರ ಅಂಗಡಿಗಾಕಿ
ಹಲ್ಲುಜೋಳ ಅಡಿಕೆಲೆ ಅಜ್ಜನ ತಂಭಾಕ
ತಂದು ಸವರ್ಧ ಅಜ್ಜಿಗಿಟ್ಟು
ಸೋಮಾರ ಸ್ನಾನಕೆ ಅಂಗಿ
ಕೈ ಹೊಲಿಗೆ ಹಾಕಿಡೆನುತ
ಕಲ್ಲು ವಲದ ಕಳೆ ಅರವತ್ತುವ ತೊಗರಿ
ಯರಿ ಬೆಳೆ ಅಂಗಲ
ಊರಗೌಡ್ರು ಎಷ್ಟುಸಲ
ಹೇಳಿ ಕಳುಹಿದರು ನಿಲ್ಲಿಸದೆ ಇಳಿವಯದಲ್ಲೂ
ಎತ್ತಿನ ಹುಲ್ಲು ತಾನ ಹೊತ್ತು
ಪಡಸಾಲೆ ಹೆಣ ಮಲಗಿದ
ಮಗನ ಬೈದು ಜತೆಗಾರರು
ದನನಿಲ್ಲುತಿಲ್ಲ ಎಂದು ಕರೆಯೇ
          ಕೋಲ ಊರುತ ಬದುಕ ದಾರಿಯ ಹಿಂದಿಕ್ಕುವ
ಕಾಯಕದ ಜೀವ ಸಾಗತಿತ್ತ

ಯಾರ ಅಂಗು ತನಗಿಲ್ಲದೆ
ಪ್ರೀತಿ ಗೌರವ ಸ್ವಾಭಿಮಾನ ಮನೆಬಾಳ್ವೆ
ಧನಗಾಹಿಗೆ ಇದ್ದದ್ದು
ಆಸಿಗೆಯಷ್ಟು ಕಾಲಚಾಚಿ ಹೊದ್ದದ್ದು
ಊರ ಉಸಬರಿ ಇನಿತಿಲ್ಲ
ತಮ್ಮನಾಗಿ ಕಾಸ ಮಲ್ಲಜ್ಜ
ಕಷ್ಟಹಂಚಿಕೊಳ್ಳಲು
ಪತ್ನಿ ಹನುಮಜ್ಜಿ ಮಕ್ಕಳು ಮರಿ
ಇವಿಷ್ಟೆ ಪ್ರಪಂಚ ಇದರಾಚೆಗೆ
ಬಡಿಗೇರ ಅನುಸೂಯಕ್ಕ
ಶಂಕ್ರಣ್ಣ ಹುಚ್ಚಲ್ಲದ ಹುಚ್ಚಿ ಕಾಳವ್ವ
ಸಣ್ಣಕಲ್ಲು ಮುಳ್ಳು
ಹಾದಿಗೆ ತೆಗೆದಿರಿಸಿ ಸೆಗಣಿಹಿಡಿತಿದ್ದ
ಕಾಯಕದ ಪರಮೇಶಜ್ಜ
ಕಟ್ಟಿದ ಹಸು ಎಮ್ಮೆ ಗಳೆ ಸ್ನೇಹಿ

ಕಾಯಕಯೋಗಿಯೇ ತಾನೆನಿಸಿ ಬದುಕಿನನೇಕ
ಪಾತ್ರ ನಿಭಾಯಿಸಿದ್ದ

ಬಿಸಿಲು ಮಳೆಗೆ ಅಳುಕಲಿಲ್ಲ
ಬಡ ಬದುಕಿಗಂತೂ
ಕಿಂಚಿತ್ತೂ ಜಗ್ಗಲಿಲ್ಲ
ಸುತ್ತಿ ಮಲೆ ಸೀಮೆ ದುಡಿದ ಜೀವ
ಉಡುಪಿ ಆಸುಪಾಸೆಲ್ಲ
ಮದುವೆಗೂ ಮುಂಚೆ
ಸಂಸಾರ ರಕ್ಷಣೆ ಹೊಣೆ ನಿಬಾಯಿಸಿ
ಮೂಗಬಸವನ ನಂಬಿ
ಮನೆ ಮಂದಿಗೆಲ್ಲ ಪ್ರೀತಿ ಹಂಚಿ
ಊರತೇರು ಬರಲು
ಕಾಡ ಖುಷಿ ಹಕ್ಕಿಯಂತಾಗಿ
ಉದ್ದದ ಬಾಕಿ ಚೀಟಿ ದಿನಸಿ
ಸಾಮಾನ ಹೊತ್ತು ಪರಿ
ದ್ಯಾಮಪ್ಳ ಮನೆಯಲಿ
ಮಾಡಿಸಿದ ಹೋಳಿಗೆಯ ಹೊದಿಸಿ
ಬಸವಣ್ಣನ ಗುಡಿಗೆ
ಆಚರಿಸಿ ದ ಹಬ್ಬ ಇನ್ನ  ಕನಸಷ್ಟೇ
       ಕೂಡು ಮನೆಗೆ ನೀಡೆ ತಾನಾಗಿ ಸಂಸ್ಕಾರ
ನೆಡೆದಿತ್ತ ವಿಭೂತಿ ಹೆಜ್ಜೆಹಾಕಿ

ಡೈರಿಗ ಹಾಲ ಮಾರಿ
ಉಣಲೊತ್ತು ಸಾಕಿ ಸಲಹಿ
ಕಚ್ಚೆಒಳ ಕಟ್ಟಿದ ರೊಕ್ಕ ಗಂಟು ಬಿಚ್ಚಿ
ಜೀವತೇದ ಓದಿಸಿದ ಪರಿ
ನೋವುಣ್ಣುತಿದೆ ನೆನಪು
ಕಣ್ಣೀರು ಬರಿಸಿ
ಇನ್ನೂ ಸಾಕುವ ಭಾಗ್ಯ
ಸಿಗದೆ ಹೋಯಿತೆನಿಸಿ
ಅದ್ಯಾದೊ ಚಿಕನಗುನ್ಯ ಕಾಲ ಹಿಡಿದು
ಮೂಲೆ ಬಿದ್ದ ನೆಲಕಚ್ಚಿದ
ಕಾಲದ ಯಮ
ಸರಗುಣಿಕೆ ಹಗ್ಗ ದೊಟ್ಟಿಗೆ
ಕೋಗಿಲೆಯಂತೆ
ಜೀವವದು ಹಾರಿ
      ಮೂಗಬಸವೇಶನ ನೆನೆನೆದು ಆತ್ಮ
ಲೋಕ ತೆರಳಿತೋ

ಹೀಡೇರದ ಕನಸಾಗಿ
ಉಳಿದ ಬದುಕಿಗೆ ಸಂಸಾರಕೆ
ನೆಮ್ಮದಿ ಗೆ ಪ್ರೀತಿಗೆ
ಸ್ವಾಭಿಮಾನ ಕೆ
ದೈವ ಭಕ್ತಿ ಗೆ ಕಾಯಕಕೆ ಗೌರವಕೆ
ಒಂದು ಜೀವನ ಪಾಠವಾಗಿ ಉಳಿದ
ಸವೆಸಿ ತುಂಬು ಬದುಕ
ಎದೆಗೆ ಬಿತ್ತಿದ
ದುಡಿಮೆಯಲೆ  ಕೈಲಾಸವೆಂದು
ಬರಿದನಗಾಹಿ ತಾನಲ್ಲ
ಕಾದದ್ದು ಮಕ್ಕಳು ಮರಿಯೆಂಬ
ನಿಜದನಗಳೆ ನಾವೆಂದು
ಅರಿವಾಗುವ ಹೊತ್ತಿಗೆ
ಸತ್ತು ವರುಷ ಹನ್ನೆರಡಾತು
       ಕರುಣಾಳು ಮೂಗಬಸವೇಶ ಆತ್ಮಕ ಚಿರಶಾಂತಿ ಕರುಣಿಸ

✍ಸಂತೋಷ್ ನಾಗರತ್ನಮ್ಮಾರ


ಸಿಂಹವೆಳಗು


ಧರೆ ಮುಗಿಲಿನ ಏಕ
ತೆರೆ ತೆರೆಗಳ ಹಬ್ಬಿ ತೇಲಿ ಬರುತಿದೆ
ಬೆಳಕು ನೋಡಿಲ್ಲಿ....

ಕಟ್ಟಿ ಕೆಂಪು ವಸ್ತ್ರವ
ಬುಟ್ಟಿಲಿ ಹೊತ್ತು ನೆಡೆದಿಹ ವೀರನ್ಯಾರೊ?
ಜ್ಯೋತಿದು ಕಾಣಿಲ್ಲಿ....

ಗೆಜ್ಜೆ ಸದ್ದಿನ ತಾಳದಿ
ಹೆಜ್ಜೆ ಹಾಕುತ ಮನಕುಣಿತಿದೆ ವೀರ ಖಡ್ಗಗಳ
ಸೊಲ್ಲು ಕೇಳಿಲ್ಲಿ .....

ಜ್ಯೋತಿಯ ರೂಪಕೆ
ಮಾರು ನಿಂತಿದೆ ಸೃಷ್ಟಿ ಕೈಯ್ಯ ಮುಗಿದು
ಧನ್ಯತೆಯ ತೋರಿಲ್ಲಿ.....

ನದಿಯೆ ಬಳುಕಿದೆ
ಬೆಟ್ಟವು ಬಾಗಿದೆ ಗಾಳಿಯೆ ಬೆದರಿದೆ
ಬೆಚ್ಚಿದ ಮೊಗದಲ್ಲಿ......

ಸುತ್ತಲು ಸಿಂಹವೆಳಗು
ಕತ್ತನು ಚಾಚಿ ಬಾಯ್ದೆರೆ ಕುಳಿತಿರೆ ಕಾವಲು
ಕತ್ತಲೆ ನಿನಗುಳಿವೆಲ್ಲಿ.....

✍️ ಸಂತೋಷ್ ನಾಗರತ್ನಮ್ಮಾರ


ಪುಷ್ಪಾಂಡಜ ಮುನಿ


#ಪುಷ್ಪಾಂಡಜಮುನಿ

ಧ್ಯಾನ ಗದ್ದುಗೆ
ಒಳಗೆ ಕೂತು
ಕತ್ತಲಿಗಂಜಿ ಕಂದನು ತಾಯಿಯ ಕರೆದಂತೆ
ಧ್ಯಾನಿಸಿದನು
ಪ್ರಣವದಿ
ಮನದೊಳಗೆ
ಪುಷ್ಪಾಂಡಜ ನೋಡಿಲ್ಲಿ.....

ಗೋಧಿ ಕಣುಕದ
ಜ್ಯೋತಿಯ
ನೆತ್ತಿಗೆ ಹೊತ್ತು
ಗೀತೆ ಖಡ್ಗಕೆ
ಹೆಜ್ಜೆ ತಾಳವ ಹಾಕುತ
ಭಕ್ತಿರಸದಿ
ಕುಣಿದನ ತಾ ಕಾಣಿಲ್ಲಿ....

ಕರಖಡ್ಗವು
ಕುಣಿತಿರೆ ಲತೆಮಿಂಚಿನ ಹಾಗೆ
ವೀರ ರಸವು
ಸಿಡಿಲಂತೆ ಎರಗಿ
ನುಡಿ ಕೆಂಡ
ಭುಗಿಲೆದ್ದು
ಅಬ್ಬೆಯ ಕೊಂಡಾಡಿದನು
ನೋಡಿಲ್ಲಿ.....

ಗುಡಿ ಗೋಪುರದಲ್ಲಿ
ಕುಳಿತಿರ
ಉತ್ಸವ ಮೂರ್ತಿಯ
ಮೇಣೆಯ
ಹೆಗಲಿಗೆ ಹೊತ್ತದೂ
ಕಾವಿ ಕೆಂಡವನೆ
ಮೈಗುಟ್ಟು
ನಡೆದನು
ಬೆಳಕೆಡೆ ಕಾಣಿಲ್ಲಿ.....

✍️ ಸಂತೋಷ್ ನಾಗರತ್ನಮ್ಮಾರ


ಪುಷ್ಪಾಂಡಜಮುನಿ ಚರಿತ್ರೆ  [ಭಾಮಿನಿ ಯಲ್ಲಿ] ಕಿರಣ ಅರ್ಕನೆ ಗೀತೆ ಕೃಷ್ಣನು ಧರಣಿ ಧೇನಿಗೆ ಬೀಜ ವೃಕ್ಷನು  ಬೆರಗಿಗಿಟ್ಟದು ಕೋಟಿ ಸಂಕುಲ ಪೊರೆವ ವಿಷ್ಣುವು ತ...