Wednesday 27 March 2024

ಪುಷ್ಪಾಂಡಜ ಮುನಿ ಚರಿತ್ರೆ

ಪುಷ್ಪಾಂಡಜಮುನಿ ಚರಿತ್ರೆ 
[ಭಾಮಿನಿ ಯಲ್ಲಿ]

ಕಿರಣ ಅರ್ಕನೆ ಗೀತೆ ಕೃಷ್ಣನು
ಧರಣಿ ಧೇನಿಗೆ ಬೀಜ ವೃಕ್ಷನು 
ಬೆರಗಿಗಿಟ್ಟದು ಕೋಟಿ ಸಂಕುಲ ಪೊರೆವ ವಿಷ್ಣುವು ತಾ।
ಧರಿಜ ಮನು ವೈವಸ್ವತ ಕುಲಜ
ನರ ಅಭೇದ್ಯದ ಕೋಟೆ ಕಟ್ಟಿಸೆ
ಕರೆದ ಸತ್ಯನಗರಿಯೆನುತೆ ಸತ್ಯಕಾತದಯೊದ್ಯೆ

ಭಾವಾರ್ಥ:
        ಸೂರ್ಯ ದೇವನೆ ಸಮಸ್ತ ಜೀವಕೋಟಿಗೆ ಜೀವವನ್ನು ಕೊಟ್ಟ ಗೀತೆಯ ಕೃಷ್ಣನು,ಅಣುಅಣುವಾಗಿ ಒಳಗೆ ನಿಂತು.ಪ್ರಾಣಿ , ಪಕ್ಷಿ ,ಹಸಿರು,ವನಗಳಿಗೆಲ್ಲ ಸೊಗಸ್ಸನ್ನ ಕೊಟ್ಟಿರುವ , ಸಾಕ್ಷಾತ್ ವಿಷ್ಣು ರೂಪವು ಆಗಿರುವನು.

       ಈ ಭೂಮಿಯಲ್ಲಿ ಹುಟ್ಟಿದ ಪ್ರಪುರುಷ ಮನು. ಈತನೆ ಸೂರ್ಯನ ಪುತ್ರ,ಪ್ರಕೃತಿ ಪುರುಷನು.ಈ ತನು ಮನುಷ್ಯರಿಂದ ಭೇದಿಸಲು ಸಾಧ್ಯವಿಲ್ಲ ದ ಕೋಟೆ ಯೊಂದನ್ನು ಕಟ್ಟಿಸಿದನು.ಅದಕ್ಕೆ ಸತ್ಯ ನಗರಿ ಎಂದು ಕರೆದ. ಸತ್ಯಕ್ಕೆ,ನ್ಯಾಯಕ್ಕೆ, ನೀತಿಗೆ, ರಾಮತೆಗೆ,ಸಂಸ್ಕಾರಕ್ಕೆ ಹೆಸರಾಗಿ  ಅಯೋಧ್ಯೆ ಎಂದು ಈ ಭೂಮಿಗೆ ಹೆಸರಾಯಿತು....

ಕಾಶಿ ಉಜ್ಜಯಿನಿ ಅಯೋಧ್ಯನಗರಿ
ಮಥುರ ಕಂಚಿ ಹರಿಧ್ವಾರ ಪುರವು
ಕೃಷ್ಣನ ಧ್ವಾರಕೆಯು ಏಳು ಐತಿಕ ತೀರ್ಥ ಕ್ಷೇತ್ರವೂ/
ಜೈನ ಸಾಕೇತನಗರವಿದುವು
ವಿಷ್ಣ ಚಕ್ರದಿ ನಿಂತ ಇನಧರೆ
ದೇವರೆ ಜನುಮವೆತ್ತ ಮೃತ್ತಿಕೆ ಸನಾತನಕಿದೊ#

ಭಾವಾರ್ಥ:

           ಭರತ ಖಂಡದ ಏಳು ಅತಿ ಪ್ರಾಚೀನ ಪುರಾಣ ಪುಣ್ಯ ಕ್ಷೇತ್ರಗಳಾದ ಕಾಶಿ - ವಿಶಾಲಾಕ್ಷಿ ವಿಶ್ವನಾಥರ ಧರ್ಮ ಕ್ಷೇತ್ರ. ಉಜ್ಜಯಿನಿ-ಶಿವ ಪಾರ್ವತಿಯರ ಕ್ಷೇತ್ರ. ಅಯೋಧ್ಯೆ -ಸೀತಾರಾಮರ ಧರೆ. ಮಥುರ- ಶ್ರೀ ಕೃಷ್ಣನ ಪುಣ್ಯ ನೆಲ. ಕಂಚಿ- ಕಾಮಾಕ್ಷಿ ದೇವಿಯ ಕ್ಷೇತ್ರ.ದ್ವಾರಕಾ- ಕೃಷ್ಣನ ಕನಸಿನ ನಗರಿ. ಈ ಹಳೆಯ ಕ್ಷೇತ್ರಗಳ ಸಾಲಿಗೆ ಸೇರಿ ಕಂಗೊಳಿಸುತ್ತಿರುವ ನಗರದಲ್ಲಿ ಅಯೋಧ್ಯೆಯು ಒಂದು.

          ಜೈನರ ಮೂರು ತೀರ್ಥಂಕರ ಹುಟ್ಟಿಗೆ ಕಾರಣವಾದ ಈ ನಗರ ಸಾಕೇತನಗರಿ ಎಂದು ಹೆಸರಾಗಿದ್ದು ಇದೆ. ಅಯೋಧ್ಯ ನಗರಿ ವಿಷ್ಣು ಚಕ್ರದ ಮೇಲೆ ನಿಂತಂತಿದೆ. ಸನಾಥನ ಧರ್ಮಕ್ಕೆ ದೇವರುಗಳು ಕೊಟ್ಟ ಪುಣ್ಯಭೂಮಿಯಾಗಿ ಅಯೋಧ್ಯೆ ಕಮಲ ಕೇಸರವಾಗಿ ಮೆರೆಯುತಿದೆ...

      ✍️ ಸಂತೋಷ್ ನಾರತ್ನಮ್ಮಾರ

No comments:

Post a Comment

ಪುಷ್ಪಾಂಡಜಮುನಿ ಚರಿತ್ರೆ  [ಭಾಮಿನಿ ಯಲ್ಲಿ] ಕಿರಣ ಅರ್ಕನೆ ಗೀತೆ ಕೃಷ್ಣನು ಧರಣಿ ಧೇನಿಗೆ ಬೀಜ ವೃಕ್ಷನು  ಬೆರಗಿಗಿಟ್ಟದು ಕೋಟಿ ಸಂಕುಲ ಪೊರೆವ ವಿಷ್ಣುವು ತ...