Sunday 17 March 2024

ಪುಷ್ಪಾಂಡಜ ಮುನಿ


#ಪುಷ್ಪಾಂಡಜಮುನಿ

ಧ್ಯಾನ ಗದ್ದುಗೆ
ಒಳಗೆ ಕೂತು
ಕತ್ತಲಿಗಂಜಿ ಕಂದನು ತಾಯಿಯ ಕರೆದಂತೆ
ಧ್ಯಾನಿಸಿದನು
ಪ್ರಣವದಿ
ಮನದೊಳಗೆ
ಪುಷ್ಪಾಂಡಜ ನೋಡಿಲ್ಲಿ.....

ಗೋಧಿ ಕಣುಕದ
ಜ್ಯೋತಿಯ
ನೆತ್ತಿಗೆ ಹೊತ್ತು
ಗೀತೆ ಖಡ್ಗಕೆ
ಹೆಜ್ಜೆ ತಾಳವ ಹಾಕುತ
ಭಕ್ತಿರಸದಿ
ಕುಣಿದನ ತಾ ಕಾಣಿಲ್ಲಿ....

ಕರಖಡ್ಗವು
ಕುಣಿತಿರೆ ಲತೆಮಿಂಚಿನ ಹಾಗೆ
ವೀರ ರಸವು
ಸಿಡಿಲಂತೆ ಎರಗಿ
ನುಡಿ ಕೆಂಡ
ಭುಗಿಲೆದ್ದು
ಅಬ್ಬೆಯ ಕೊಂಡಾಡಿದನು
ನೋಡಿಲ್ಲಿ.....

ಗುಡಿ ಗೋಪುರದಲ್ಲಿ
ಕುಳಿತಿರ
ಉತ್ಸವ ಮೂರ್ತಿಯ
ಮೇಣೆಯ
ಹೆಗಲಿಗೆ ಹೊತ್ತದೂ
ಕಾವಿ ಕೆಂಡವನೆ
ಮೈಗುಟ್ಟು
ನಡೆದನು
ಬೆಳಕೆಡೆ ಕಾಣಿಲ್ಲಿ.....

✍️ ಸಂತೋಷ್ ನಾಗರತ್ನಮ್ಮಾರ


No comments:

Post a Comment

ಪುಷ್ಪಾಂಡಜಮುನಿ ಚರಿತ್ರೆ  [ಭಾಮಿನಿ ಯಲ್ಲಿ] ಕಿರಣ ಅರ್ಕನೆ ಗೀತೆ ಕೃಷ್ಣನು ಧರಣಿ ಧೇನಿಗೆ ಬೀಜ ವೃಕ್ಷನು  ಬೆರಗಿಗಿಟ್ಟದು ಕೋಟಿ ಸಂಕುಲ ಪೊರೆವ ವಿಷ್ಣುವು ತ...