Sunday 17 March 2024

ಅರ್ಕಿಣಿವೃಕ್ಷ [ಚೌಡೇಶ್ವರಿ ಅಬ್ಬೆ]


ಅರ್ಕಿಣಿವೃಕ್ಷ [ಚೌಡೇಶ್ವರಿ ಅಬ್ಬೆ]

ನಿರ್ಮಲ ಎರ್ದೆಯ
ಪೆರ್ಮರ ನೆಳ್ಳಿನ
ಧರ್ಮದ ಕಾವಲ ಅರ್ಕಿಣಿ ವೃಕ್ಷವು ನೀ
ಕರ್ಮದ ಗೀತದಿ
ಮರ್ಮದ ಚಕ್ರದಿ
ಧರ್ಮಕೆ ತಿರುಗುತ ನಿಂತಿಹ ಕಕ್ಷವು ನೀ

ಊದಿದೆ ಶಂಖವ
ಭಾಧಿಸ ದುರಳರ
ವೇದನೆ ತಾಳದೆ ಮೇದಿನಿ ರಕ್ಷಣೆಗೆ
ಛೇದಿಸಿ ಶಿರಗಳ
ರೋಧಿಸಿ ಚಚ್ಚಿದೆ
ಗಾದೆಯ ಬೀಳಿಸಿ ಏಳಿಸಿ ತಕ್ಷಣಕೆ

ನಾದದ ಶಾರದೆ
ವೇದದ ಗಾಯತ್ರಿ
ಭೇದದ ಭಾವವು ಇಲ್ಲದ ಶಿವೆಯಬ್ಬೆ.....
ಮಾದರಿ ಬದುಕಿಗೆ
ಸಾಧಿಸ ಛಲವನು
ಭೇದಿಸ ಬಲಕೊಡ ಕ್ಷಾತ್ರದ ಜೀಜಬ್ಬೆ....

ನೀಲಿಯ ಬಾನಿನ
ತೇಲುವ ಹಂಸವ
ಹೋಲುವ ಭೂಮಿಕೆ ಕೊರಳನು ಉರುಳಿಸಲು
ಬೇಲಿಯ ಮುಳ್ಳವು
ಗೋಳಿಗೆ ಚುಚ್ಚುವ
ಚಾಳಿಯ ಸುಟ್ಟಿರ ಕತೆಯಿವು ಹೊಸದೇನೂ

ಒಟ್ಟಿಗೆ ಇರಲಿದು
ಬಿಟ್ಟರ ಬಿಡನೆನ
ಕಟ್ಟಿಯೆ ನಿಲಿಸುವೆ ಕಂದಕ ಗೋಡೆನುವ
ದುಷ್ಟರ ಆಟವ
ಮಟ್ಟವ ಹಾಕಲು
ಹುಟ್ಟಿಸೆ ಸಿಂಹವೆಳಗನೊಂದನು ತಾಯೆ

ಹಳ್ಳಿಯು ಎನ್ನದೆ
ಜಿಲ್ಲೆಯು ಅನ್ನದೆ
ಗಲ್ಲಿಯ ವೋಣಿಗು ಕಟ್ಟಿರೆ ನಿನಗುಡಿಯ
ಎಲ್ಲರ ಭಕ್ತಿಯ
ಸೊಲ್ಲಿನ ಖಡ್ಗಕೆ
ಬೆಲ್ಲದಿ ಕರಗುತ ನಿಂತಿದೊ ಊಂಕರಿಸು

ಒಬ್ಬರಿ ಗೊಬ್ಬರು
ಇಬ್ಬಗೆ ನೀತಿಯ
ಮಬ್ಬದು ನಾರಿಡೆ ನಾವಿಕ ಗಬ್ಬಿಡುತ
ಇಬ್ಬಗೆ ಸುಟ್ಟಿದು
ಒಬ್ಬಗೆ ನಿಟ್ಟಿದೊ
ಹಬ್ಬವ ಮಾಡಿಸೆ ಜೋತಿಯ ಎಬ್ಬಿಸುತ

✍️ ಸಂತೋಷ್ ನಾಗರತ್ನಮ್ಮಾರ


No comments:

Post a Comment

ಪುಷ್ಪಾಂಡಜಮುನಿ ಚರಿತ್ರೆ  [ಭಾಮಿನಿ ಯಲ್ಲಿ] ಕಿರಣ ಅರ್ಕನೆ ಗೀತೆ ಕೃಷ್ಣನು ಧರಣಿ ಧೇನಿಗೆ ಬೀಜ ವೃಕ್ಷನು  ಬೆರಗಿಗಿಟ್ಟದು ಕೋಟಿ ಸಂಕುಲ ಪೊರೆವ ವಿಷ್ಣುವು ತ...